ಸೆಪ್ಟೆಂಬರ್ 8ರಂದು ಯುವ ದಸರಾ ಕಾರ್ಯಕ್ರಮದಲ್ಲಿ ಬಾದ್ಶಾ ಭಾಗಿ ಆಗಿದ್ದರು. ಈ ವೇಳೆ ಕನ್ನಡದಲ್ಲಿ ಮಾತನಾಡಿದ ಅವರು, ಕನ್ನಡದ ಒಂದು ಹಾಡು ಕೇಳಿ ಸಖತ್ ಎಮೋಷನಲ್ ಆದರು
ಮೈಸೂರಿನಲ್ಲಿ ‘ಯುವ ದಸರಾ’ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ಬಂದು ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಸೆಪ್ಟೆಂಬರ್ 8ರಂದು ಬಾಲಿವುಡ್ ಗಾಯಕ ಬಾದ್ಶಾ ಆಗಮಿಸಿದ್ದರು. ಕನ್ನಡದಲ್ಲಿ ಮಾತನಾಡಿದ್ದೂ ಅಲ್ಲದೆ, ಕನ್ನಡದ ಒಂದು ಹಾಡು ಕೇಳಿ ಅವರು ಸಖತ್ ಎಮೋಷನಲ್ ಆದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ಸ್ ಮಾಡುತ್ತಿದ್ದಾರೆ.
ಕನ್ನಡದಲ್ಲಿ ಮಾತನಾಡಿದ ಬಾದ್ಶಾ, ‘ಯಾರೂ ಸ್ಟಾರ್ ಅಲ್ಲ, ಯಾರೂ ಸೂಪರ್ಸ್ಟಾರ್ ಕೂಡ ಅಲ್ಲ. ನಾನು ಸಿಂಗರ್ ಅಲ್ಲ, ನಾನು ಬರಹಗಾರ. ನನಗೆ ಹೇಗೆ ಬರೆಯಬೇಕು ಎಂಬುದು ಗೊತ್ತಷ್ಟೇ. ನಾನು ಫೀಲೀಂಗ್ಸ್ನ ಬರೆಯುತ್ತೇನೆ. ನಾನು ನಿಮ್ಮಲ್ಲಿ ಒಬ್ಬ. ನಿಮ್ಮ ಆಶೀರ್ವಾದಿಂದ ಇಲ್ಲಿದ್ದೇನೆ. ನಾನು ನಿಮಗೆ ಸದಾ ಚಿರರುಣಿ’ ಎಂದು ಕನ್ನಡದಲ್ಲಿ ಮಾತನಾಡಿದರು ಬಾದ್ಶಾ. ಅವರ ಈ ಮಾತು ಕೇಳಿ ನೆರೆದಿದ್ದವರು ಥ್ರಿಲ್ ಆದರು.