ತಮಿಳುನಾಡಿನಲ್ಲಿ ಮತ್ತೆ ಭಾರಿ ಮಳೆ : ಶಾಲೆಗಳಿಗೆ ರಜೆ , ಯೆಲ್ಲೋ – ಆರೆಂಜ್ Alert ಘೋಷಣೆ

ತಮಿಳುನಾಡು: ಬುಧವಾರ ರಾತ್ರಿಯಿಂದ ಆರಂಭವಾದ ಭಾರೀ ಮಳೆಯಿಂದಾಗಿ ತಮಿಳುನಾಡು ಸರ್ಕಾರ ಚೆನ್ನೈ ಮತ್ತು ಸಮೀಪದ ಜಿಲ್ಲೆಗಳಲ್ಲಿ ಶಾಲೆಗಳಿಗೆ ಗುರುವಾರ ರಜೆ ಘೋಷಿಸಿದೆ. ವಿಲ್ಲುಪುರಂ, ತಂಜಾವೂರು, ಮೈಲಾಡುತುರೈ, ರಾಮನಾಥಪುರಂ, ದಿಂಡಿಗಲ್, ಕಡಲೂರು ಮತ್ತು ಪುದುಕ್ಕೊಟ್ಟೈ ಜಿಲ್ಲಾಧಿಕಾರಿಗಳು ಶಾಲೆಗಳಿಗೆ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲೂ ಗುರುವಾರ ಮಳೆ ಪೀಡಿತ ಪ್ರದೇಶದ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದೆ. ಶ್ರೀಲಂಕಾ ಕರಾವಳಿಯ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಪ್ರಸ್ತುತ ಕಡಿಮೆ ಒತ್ತಡದ ಪ್ರದೇಶ ಉಂಟಾಗಿದೆ ಎಂದು ಗುರುತಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ-ವಾಯುವ್ಯದ ಕಡೆಗೆ ಶ್ರೀಲಂಕಾ-ತಮಿಳುನಾಡು ಕರಾವಳಿಯ ಕಡೆಗೆ ಚಂಡಮಾರುತವು ಚಲಿಸುವ ನಿರೀಕ್ಷೆಯಿದೆ.
ಇದರಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್‌ಪಟ್ಟು, ತಿರುವಣ್ಣಾಮಲೈ, ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು, ಪೆರಂಬಲೂರ್, ತಿರುಚ್ಚಿ, ಶಿವಗಂಗಾ, ರಾಮನಾಥಪುರಂ, ಮೈಲಾಡುತುರೈ, ನಾಗಪಟ್ಟಿಣಂ, ಕೊಯಮತ್ತೂರು, ತಿರುಪುರ್, ಕರೂರ್, ಥೇಣಿ, ದಿಂಡಿಗಲ್, ಮಧುರೈ, ವಿರುದುಕುಡಿನಗರ, ಟಿ.ವಿರುದುಕುಡಿನಗರ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಕೆಲವು ಜಿಲ್ಲೆಗಳಿಗೆ ಯೆಲ್ಲೋ- ಆರೇಂಜ್ ಅಲರ್ಟ್ ಘೋಷಣೆ
ಪ್ರಾದೇಶಿಕ ಹವಾಮಾನ ಕೇಂದ್ರ (RMC) ಗುರುವಾರ ತಮಿಳುನಾಡಿನ ಹಲವಾರು ಜಿಲ್ಲೆಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಬುಧವಾರ, ಚೆನ್ನೈ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಇದು ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತನ್ನ ಪ್ರಕಟಣೆಯಲ್ಲಿ ಮಾಹಿತಿ ಒದಗಿಸಿದೆ.

Related Posts

ಪಾರ್ಸೆಲ್ನಲ್ಲಿ ಇತ್ತು ಮಾನವನ ಶ*: ಬೆಚ್ಚಿಬಿದ್ದ ಮಹಿಳೆ!

ಆಂಧ್ರಪ್ರದೇಶ: ಮಹಿಳೆಯೊಬ್ಬರಿಗೆ ಬಂದ ಪಾರ್ಸೆಲ್ನಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ಆಘಾತಕಾರಿ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ಉಂಡಿ ಮಂಡಲದ ಯಂಡಗಂಡಿಯಲ್ಲಿ ನಡೆದಿದೆ. ಮಹಿಳೆ ಪಾರ್ಸೆಲ್ನಲ್ಲಿ ಅಪರಿಚಿತ ಶವವನ್ನು ಕಂಡು ಬೆಚ್ಚಿಬಿದ್ದಿದ್ದು , ಆಕೆಯ ಕುಟುಂಬಸ್ಥರು ಈ ಸಂಬಂಧ ಕೂಡಲೇ ಪೊಲೀಸರಿಗೆ ಮಾಹಿತಿ…

14 ತಿಂಗಳ ಮಗು ವಿಕ್ಸ್ ಡಬ್ಬದ ಮುಚ್ಚಳ ನುಂಗಿ ಸಾ* ; 18ವರ್ಷಗಳ ಬಳಿಕ ಜನಿಸಿದ ಮಗುವಿನ ದುರಂತ ಅಂತ್ಯ

ರಾಜಸ್ಥಾನ: ಆಟವಾಡುತ್ತಲೇ ವಿಕ್ಸ್ ಡಬ್ಬದ ಮುಚ್ಚಳ ನುಂಗಿ 14 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದಿದೆ. ಮದುವೆಯಾಗಿ 18 ವರ್ಷಗಳ ಬಳಿಕ ಹುಟ್ಟಿದ ಮಗು ಈಗ ದುರಂತ ಅಂತ್ಯ ಕಂಡಿದ್ದು, ಪೋಷಕರ ಆಕ್ರೋಶ ಮುಗಿಲು ಮುಟ್ಟಿದೆ. ಸರೆಡಿ ಗ್ರಾಮದ…

Leave a Reply

Your email address will not be published. Required fields are marked *

You Missed

ಬೆಳಗಾವಿಯಿಂದ ಬೆಂಗಳೂರಿಗೆ ಸಿ.ಟಿ ರವಿ ಶಿಫ್ಟ್…

ಬೆಳಗಾವಿಯಿಂದ ಬೆಂಗಳೂರಿಗೆ ಸಿ.ಟಿ ರವಿ ಶಿಫ್ಟ್…

ಪಾರ್ಸೆಲ್ನಲ್ಲಿ ಇತ್ತು ಮಾನವನ ಶ*: ಬೆಚ್ಚಿಬಿದ್ದ ಮಹಿಳೆ!

ಪಾರ್ಸೆಲ್ನಲ್ಲಿ ಇತ್ತು ಮಾನವನ ಶ*: ಬೆಚ್ಚಿಬಿದ್ದ ಮಹಿಳೆ!

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ..

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ..

ಯಾವ ಹೆಣ್ಣುಮಕ್ಕಳೂ ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡೋದಿಲ್ಲ : ಸಿಎಂ ಸಿದ್ದರಾಮಯ್ಯ

ಯಾವ ಹೆಣ್ಣುಮಕ್ಕಳೂ ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡೋದಿಲ್ಲ : ಸಿಎಂ ಸಿದ್ದರಾಮಯ್ಯ

ಸಾರಿಗೆ ಇಲಾಖೆಯಿಂದ ವೈಟ್ ಬೋರ್ಡ್ ಟ್ರಾವೆಲ್ಸ್ ಮಾಲೀಕರಿಗೆ ಬಿಗ್ ಶಾಕ್.

ಸಾರಿಗೆ ಇಲಾಖೆಯಿಂದ ವೈಟ್ ಬೋರ್ಡ್ ಟ್ರಾವೆಲ್ಸ್ ಮಾಲೀಕರಿಗೆ ಬಿಗ್ ಶಾಕ್.

ಎಷ್ಟೇ ರೇಡ್ ಮಾಡಿದ್ರೂ ಅದೇ ರಾಗ ಅದೇ ಹಾಡು : ಪರಪ್ಪನ ಅಗ್ರಹಾರ ಜೈಲಿನಲ್ಲಿ‌ ಮತ್ತೆ ಮೊಬೈಲ್ ಸೌಂಡ್!

ಎಷ್ಟೇ ರೇಡ್ ಮಾಡಿದ್ರೂ ಅದೇ ರಾಗ ಅದೇ ಹಾಡು : ಪರಪ್ಪನ ಅಗ್ರಹಾರ ಜೈಲಿನಲ್ಲಿ‌ ಮತ್ತೆ ಮೊಬೈಲ್ ಸೌಂಡ್!